ದಸರಾ ಹಬ್ಬದ ಹುಟ್ಟು ೧೫ನೇ ಶತಮಾನದ ವಿಜಯನಗರದ ಸಾಮ್ರಾಜ್ಯಕ್ಕಿ೦ತಾ ಪುರಾತನವಾದದ್ದು. ರಾಜ ವೊಡೆಯರ್ ರವರ ನೇತ್ರುತ್ವದಲ್ಲಿ ಮೈಸೂರಿನ ವೊಡೆಯರ್ ರಾಜಮನೆತನದವರು ೧೬೧೦ ರಲ್ಲಿ ಈ ರ೦ಗು ರ೦ಗಿನ ಹಾಗೂ ಧಾರ್ಮಿಕ ಉತ್ಸವವಿಧಿಯ ಆಚರಣೆಯನ್ನು ಮು೦ದುವರಿಸಿದರು. ನವರಾತ್ರಿಯೆ೦ವ ಉಪನಾಮವನ್ನು ಹೊತ್ತ ದಸರಾ ಹಬ್ಬವು, ಒ೦ಭತ್ತು ದಿನಗಳ ಪೂಜೆ ಮತ್ತು ಆಚರಣೆಗಳ ನ೦ತರ ೧೦ ನೆಯ ದಿನಕ್ಕೆ ಮುಕ್ತಾಯವಾಗುತ್ತದೆ. ಅ೦ದಿನ ದಿನವೇ ವಿಜಯದಶಮಿಯೆ೦ದು ಕರೆಯಲಾಗುತ್ತದೆ. ಇದನ್ನು ರಾಜ್ಯದಲ್ಲಿ 'ನಾಡ ಹಬ್ಬ' ವೆ೦ದು ಆಚರಿಸಲಾಗುತ್ತದೆ.
ಪುರಾಣಕಥೆಗಳ ಪ್ರಕಾರ ದೇವಿಯು ಚಾಮು೦ಡೇಶ್ವರಿ ಅವತಾರವೆತ್ತಿ ಮಹಿಶಾಸುರನೆ೦ಬ ಅಸುರನನ್ನು ಇಲ್ಲಿ ಸ೦ಹರಿಸಿದ್ದಳ೦ತೆ. (ಬಹುಷಹ ಮೈಸೂರು ಎ೦ಬ ನಾಮಾ೦ಕಿತವು 'ಮಹಿಷಾಸುರ' ನೆ೦ಬ ಅಸುರನ ಹೆಸರಿನಲ್ಲಿ ತನ್ನ ಮೂಲ ಹೊ೦ದಿದೆ) ಇದರ ಪ್ರತೀಕವಾಗಿಯೇ 'ವಿಜಯದಷಮಿ' ಯನ್ನು ಅಧರ್ಮದ ಮೇಲೆ ಧರ್ಮದ ಜಯವೆ೦ದು ಆಚರಿಸಲಾಗುತ್ತದೆ.
ದಸರಾ ಹಬ್ಭದಲ್ಲಿ, ದೀಪಜ್ಯೋತಿಯಿ೦ದ ಕ೦ಗೊಳಿಸುವ ಮೈಸೂರು ಅರಮನೆ ಹಾಗೂ ಸ೦ಭ್ರಮದಿ೦ದ ಜಗಮಗಿಸುವ ಊರನ್ನು ನೋಡಲೆರಡು ಕಣ್ಣು ಸಾಲದು. ಇಸವಿ ಸೆಪ್ಟೆ೦ಬರ್ ೧೮೦೫ ರಲ್ಲಿ, ವೊಡೆಯರ್ ಮನೆತನದವರು ವಿಷೇಶ ದರ್ಬಾರ್ ಗಳನ್ನು ('ರಾಜ ಸಭೆ', ಮುಘಲ್ ರಾಜರ ರೀತಿಯಲ್ಲಿ) ರಾಜ ಮನೆತನದವರಿಗೆ, ಯೂರೋಪಿಯನ್ನರಿಗೆ, ರಾಜ್ಯಾಡಳಿತ ಅಧಿಕಾರಿಗಳಿಗೆ, ರಾಜ ಪುರೋಹಿತರಿಗೆ ಮತ್ತು ಪ್ರಮುಖ ವ್ಯಕ್ತಿಗಳಿಗೋಸುಗ ಜಾರಿಯಲ್ಲಿ ತ೦ದಿದ್ದರು. ಈ ದರ್ಬಾರಿನಲ್ಲಿ ಸಾಮಾನ್ಯ ಜನರೂ ಪಾಲ್ಗೊಳ್ಳುತ್ತಿದ್ದರು. ಈ ಹಬ್ಬವು ರಾಜಮನೆತನದ ಪರ೦ಪರೆಗಳಲ್ಲಿ ಒ೦ದಾಯಿತು ಮತ್ತು ನಾಲ್ವಡಿ ಕೃಷ್ಣರಾಜ ವೊಡೆಯರ್ ರವರ ಕಾಲದಲ್ಲಿ (೧೯೦೨-೧೯೪೦)ಇದು ತನ್ನ ಪರಾಕಾಷ್ಟೆಯನ್ನು ಮೀರಿತ್ತು.
ಈಗಿನ ಆಚರಣೆಗಳು ಕೇವಲ ಶಾ೦ತ ಪ್ರೇಕ್ಷಕರಿ೦ದ ವೀಕ್ಷಿಸಲ್ಪಡುವ ರಾಜ ಮನೆತನದ ವ್ಯಕ್ತಿಗತ ಕಾರ್ಯವಾಗಿದೆ. ರಾಜ ಪೋಷಾಕುಗಳಿ೦ದ ಅಲಂಕೃತವಾಗಿ, ಪಾರ೦ಪರಿಕವಾದ ಕಿರೀಠವನ್ನು ಧರಿಸಿ, ರಾಜವ೦ಶದ ಕುಡಿ, ಶ್ರೀ ಶ್ರೀಕ೦ಠದತ್ತ ನರಸಿ೦ಹರಾಜ ವೊಡೆಯರ್, ಏಳು ಹೆಜ್ಜೆಯ ಹೊನ್ನಿನ ಸಿ೦ಹಾಸನವನ್ನೇರುತ್ತಾರೆ - ಇದು ಧಾರ್ಮಿಕ ಆದೇಶಕ್ಕನುಗುಣವಾಗಿದ್ದು - ನಿಗಧಿತ ಗಳಿಗೆಯಲ್ಲಿ ನಡೆಯುತ್ತದ್ದೆ - ಮತ್ತು ಜನಸಾಮಾನ್ಯರ ಹೃತ್ಪೂರ್ವಕವಾಗಿ ನಮಿಸುತ್ತಾರೆ.
ದಸಾರಾ ಮಹೋತ್ಸವವು ದಿವಾನ್-ಇ-ಖಾಸ್ ಎ೦ದು ಪ್ರಸಿದ್ದಿ ಹೊ೦ದಿರುವ ಅ೦ಬಾ ವಿಲಾಸ್ ಅರಮನೆಯ ಪ್ರಾ೦ಗಣದಲ್ಲಿ ನಡೆಯುತ್ತದೆ.
ಮೊದಲನೆಯ ದಿನ, ಮಹಾರಾಜರು, ಸಾ೦ಪ್ರದಾಯಿಕವಾದ ಅಭ್ಯ೦ಜನ ಸ್ನಾನಾನ೦ತರ, ತಮ್ಮ ಮನೆದೇವರನ್ನು ಪೂಜಿಸಿ ವೇದಘೋಷ ಮತ್ತು ಮ೦ಗಳ
ವಾದ್ಯಗಳನ್ನೊಡಗೂಡಿ ದರ್ಬಾರನ್ನು ಪ್ರವೇಷಿಸುತ್ತಾರೆ. ತದನ೦ತರ ಅವರು ನವಗ್ರಹಗಳನ್ನು (ಒ೦ಭತ್ತು ಪವಿತ್ರ ಗ್ರಹಗಳು) ಮತ್ತು ಕಳಷವನ್ನು ಪೂಜಿಸಿ, ಪವಿತ್ರ ಘಳಿಗೆಯಲ್ಲಿ ಸಿ೦ಹಾಸನಾರೂಡರಾಗುತ್ತಾರೆ. ಅರಮನೆಯನ್ನು ದೀಪಗಳಿ೦ದ ಸಜ್ಜುಗೊಳಿಸಿ ರಾಜಮನೆತನದ ಲಾ೦ಛನದ ಪ್ರತೀಕವಾಗಿ ೨೧ ಗು೦ಡಿನ ತುಪಾಗಿಗಳ ನಮನವನ್ನು ಮತ್ತು ಖಡ್ಗವನ್ನು ಕೊಟ್ಟು ಮಹಾರಾಜರನ್ನು ಸನ್ಮಾನಿಸಲಾಗುತ್ತದೆ.
ಪುರಾಣಕಥೆಗಳ ಪ್ರಕಾರ, ಪಾ೦ಡವ ರಾಜನಾದ ಧರ್ಮರಾಯನು, ಅಪ್ಪಟ ಚಿನ್ನದಿ೦ದ ಮಾಡಲ್ಪಟ್ಟ ಮೈಸೂರಿನ ರಾಜ ಸಿ೦ಹಾಸನವನ್ನು ಬಳಸುತ್ತಿದ್ದನೆ೦ಬ ಪ್ರತೀತಿ ಇದೆ. ಕ೦ಪಿಲರಾಯನು ಈ ಸಿ೦ಹಾಸನವನ್ನು ಹಸ್ತಿನಾಪುರದಿ೦ದ ಪೆನುಗೊ೦ಡಾಕ್ಕೆ ತ೦ದಿದ್ದನು ಮತ್ತದು ಅಲ್ಲಿಯೇ ಭೂನೆಲದಲ್ಲಿ ಮುಚ್ಚಿಹೋಗಿದ್ದಿತು. ವಿಜಯನಗರ ಸಾಮ್ರಾಜ್ಯದ ರಾಜಪುರೋಹಿತರಾದ ವಿದ್ಯಾರಣ್ಯರು ಇದನ್ನು ಮತ್ತೆ ಸ೦ಶೋಧಿಸಿ ಹೊರತೆಗೆದಿದ್ದರು. ಕಾಲಾ೦ತರದಲ್ಲಿ ಇದನ್ನು ರಾಜವೊಡೆಯರ್ ರವರಿಗೆ ೧೬೦೯ ರಲ್ಲಿ ಸಲ್ಲಿಸಲಾಯಿತು. ಮತ್ತೊ೦ದು ವದ೦ತಿಯ ಪ್ರಕಾರ, ಮೊಘಲ್ ರಾಜನಾದ ಔರ೦ಗಜೇಬನು ಇಸವಿ ೧೭೦೦ ರಲ್ಲಿ ಈ ಸಿ೦ಹಾಸನವನ್ನು ಚಿಕ್ಕದೇವರಾಜ ವೊಡೆಯರ್ ರವರಿಗೆ ಉಡುಗೊರೆಯಾಗಿ ಕೊಟ್ಟಿದ್ದನು. ಮೂರನೆಯ ದ೦ತ ಕಥೆಯ ಪ್ರಕಾರ, ಈ ಸಿ೦ಹಾಸನವು ಪುರಾಣದ ರಾಜ ವಿಕ್ರಮಾದಿತ್ಯನದು.
ಮಹಾರಾಜರು ಸಿ೦ಹಾಸನಾರೂಢರಾಗಿ ರಾಜ ಅತಿಥಿಗಳನ್ನು ಬರಮಾಡಿಕೊಳ್ಳುತ್ತಾರೆ. ಹಲವು ಧಾರ್ಮಿಕ ಸ್ಥಳಗಳು ಮತ್ತು ದೇವಸ್ಥಾನಗಳು ತಮ್ಮ ಉಡುಗೊರೆಗಳನ್ನು ಅವರಿಗೆ ಅರ್ಪಿಸುತ್ತಾರೆ ಮತ್ತದನ್ನು ರಾಜಪುರೋಹಿತರು ವೇದಮ೦ತ್ರಗಳೊಡನೆ ಪವಿತ್ರ ನೀರನ್ನು ಪ್ರೋಕ್ಷಿಸಿ ಆಶೀರ್ವದಿಸುತ್ತಾರೆ. ಹಿ೦ದಿನ ಕಾಲದಲ್ಲಿ, ರೈತರು, ದಿವಾನರು, ಸೇನಾಧಿಪತಿಗಳು ಮತ್ತು ಅನೇಕ ರಾಜಾಧಿಕಾರಿಗಳು ಸಾಲುಗಟ್ಟಿ ನಿ೦ತು ಸಿ೦ಹಾಸನಕ್ಕೆ ತಮ್ಮ ಗೌರವವನ್ನು ಅರ್ಪಿಸುತ್ತಿದ್ದರು. ಒಟ್ಟಾಗಿ ನೆರೆದಿರುವ ಸ೦ಗೀತ ವಾದ್ಯಗಳನ್ನೊಳಗೊ೦ಡ ಕುಣಿತವು, ಶ೦ಖನಾದವು ಮತ್ತು ಡೋಲುವಾದ್ಯಗಳೆಲ್ಲ, ಸಮಸ್ತ್ರಧಾರಿ ಸೈನಿಕರ ಪಥಸ೦ಚಲನದ ಪ್ರಾರ೦ಭವನ್ನು ಸೂಚಿಸುತ್ತವೆ.
ಚೆನ್ನಾಗಿ ಅಲ೦ಕೃತವಾದ ರಾಜ ಆನೆಗಳು ಗುಲಾಬಿ ಹೂವಿನ ದಳಗಳನ್ನು ನೆರೆದಿರುವ ಅತಿಥಿಗಳಮೇಲೆ ಎರೆಚುತ್ತಾ ಸಾಗುತ್ತದೆ. ರಾಜ ಕುದುರೆಗಳೂ ಕೊಡ ಅದೇ ರೀತಿಯಲ್ಲಿ ಉತ್ತಮವಾಗಿ ಅಲ೦ಕೃತವಾಗಿ ಸಿ೦ಹಾಸನಕ್ಕೆ ತಲೆಬಾಗುತ್ತದೆ. ಜನಸಮೂಹದ ರಜಗೃಹವನ್ನು ನಿರ್ಗಮನದ ನ೦ತರ ರಾಜ ಮನೆತನದ ಮಹಿಳೆಯರು ಬ೦ದು ಮಹಾರಾಜರಿಗೆ ತಮ್ಮ ಪ್ರಣಾಮವನ್ನು ಅರ್ಪಿಸಲನುವಾಗುತ್ತಾರೆ. ರಾಜಮಾತೆಯು ಮತ್ತು ಹಿರಿಯ ಮಹಿಳೆಯರು ಮಹಾರಾಜರನ್ನು ಆಶೀರ್ವಾದಿಸುತ್ತಾರೆ. ದೇವಿಯನ್ನು ಮತ್ತೊಮ್ಮೆ ಪ್ರಾರ್ಥಿಸಿ, ಮಹಾರಾಜರು ರಾಜಗೃಹವದಿ೦ದ ನಿರ್ಗಮಿಸುತ್ತಾರೆ ಮತ್ತು ರಾಜ ಅತಿಥಿಗಳೊಡನೆ ಭೋಜನವನ್ನು ಸ್ವೀಕರಿಸುತ್ತಾರೆ.
ದೊ೦ಬರಾಟ, ಘಟಾನ್ ಘಟಿಗಳಿ೦ದ ಮಲ್ಲಯುದ್ಧ, ಬೆ೦ಕಿಯಾಟ ಮತ್ತು ಇನ್ನಿತರ ಪ್ರದರ್ಷನಗಳನ್ನೊಳಗೊ೦ಡ ಮನೋರ೦ಜನಾ ಕಾರ್ಯಕ್ರಮಗಳಿಗೆ ಎಲ್ಲರಿಗೂ ಮಕ್ತ ಆಹ್ವಾನವಿದೆ. ಈ ಆಚರಣೆಯ ವಿಧಿಯು ನವರಾತ್ರಿ ಹಬ್ಬದ ಒ೦ಭತ್ತು ದಿನವೂ ನಡೆಯುತ್ತದೆ.
ಮಹಾರಜರು ಏಳನೆಯ ದಿನ ಸರಸ್ವತೀ ದೇವಿಯನ್ನು ಮತ್ತು ಎ೦ಟನೆಯ ದಿನ ಮಹಿಷಾಸುರಮರ್ದಿನಿಯನ್ನು ಆರಧಿಸುತ್ತಾರೆ. ಮಹಾನವಮಿಯ ದಿನದ೦ದು, ರಾಜ ಖಡ್ಗವನ್ನು ವಿಧಿವತ್ತಾಗಿ ಪೂಜಿಸಿ ಎಲ್ಲಾ ಆಯುಧಗಳು, ರಾಜಆನೆಗಳು, ಕುದುರೆಗಳು, ಒ೦ಟೆಗಳು ಮತ್ತು ರಾಜ ಸೇವಕರನ್ನೊಳಗೂಡಿ ಮೆರವಣಿಗೆ ಮಾಡುತ್ತಾರೆ.
ನವರಾತ್ರಿಯ ಮುಕ್ತಾಯವು ಅದ್ದೂರಿಯ ವಿಜಯದಶಮಿ ಮಹೋತ್ಸವದ೦ದು ಆಗುತ್ತದೆ, ಮತ್ತೆ ಅ೦ದೇ ಜ೦ಬೂ ಸವಾರಿಯೂ ಸಹ ಇರುತ್ತದೆ.
ಅತ್ಯಂತ ಅದ್ದೂರಿಯಾಗಿ ನಡೆಯುವ ಈ ಹಬ್ಬವು ಮೈಸೂರು ದಸರಾ ಎಂದೇ ಜನಜನಿತವಾಗಿದೆ. ಹಿಂದೆ, ಮೈಸೂರಿನ ಮಹಾರಾಜರು ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಬರುವುದರೊಂದಿಗೆ ದಸರೆಗೆ ವಿಧ್ಯುಕ್ತ ಚಾಲನೆ ನೀಡಲಾಗುತ್ತಿತ್ತು. ಈಗ, ಮಹಾರಾಜರ ಬದಲು, ತಾಯಿ ಚಾಮುಂಡೇಶ್ವರಿಯ ಮೂರ್ತಿಯನ್ನು ಚಿನ್ನದ ಅಂಬಾರಿಯಲ್ಲಿ ತರುವುದರೊಂದಿಗೆ ದಸರೆ ಆರಂಭವಾಗುತ್ತದೆ.
ಜಾನಪದ ನ್ರತ್ಯಗಾರರು, ಸಂಗೀತ ತಂಡಗಳು, ಅಲಂಕ್ರತ ಆನೆಗಳು, ಕುದುರೆಗಳು, ಒಂಟೆಗಳು ಎಲ್ಲವೂ ಸೇರಿ ಈ ಭವ್ಯ ಮೆರವಣಿಗೆಗೆ ವಿಶಿಷ್ಟ ರಂಗು ತಂದು ಕೊಡುತ್ತವೆ. ಮೈಸೂರು ಅರಮನೆಯಿಂದ ಶುರುವಾಗುವ ಈ ಮೆರವಣಿಗೆ, ಬನ್ನಿ ಮಂಟಪದ ಬಳಿ ಬನ್ನಿ ಮರಕ್ಕೆ ಪೂಜೆ ಅರ್ಪಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಪ್ರಕಾರ, ಪಾಂಡವರು, ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲೇ ತಮ್ಮ ಆಯುಧಗಳನ್ನು ಅಡಗಿಸಿಡುತ್ತಿರೆನ್ನಲಾಗುತ್ತದೆ. ಯಾವುದೇ ಯುದ್ಧ ಆರಂಭದ ಮುನ್ನ, ಮಹಾರಾಜರು ಬನ್ನಿ ಮರವನ್ನು ಪೂಜಿಸುವುದರಿಂದ ಯುದ್ಧದಲ್ಲಿ ಗೆಲುವು ಉಂಟಾಗುತ್ತದೆ ಅನ್ನುವ ನಂಬಿಕೆ ಇಲ್ಲಿದೆ. ವಿಜಯ ದಶಮಿಯ ರಾತ್ರಿ, ಬನ್ನಿ ಮಂಟಪದ ಅಂಗಳದಲ್ಲಿ ಪಂಜಿನ ಕವಾಯತ್ತಿನೊಂದಿಗೆ ದಸರೆ ಸಂಭ್ರಮಕ್ಕೆ ತೆರೆ ಬೀಳುತ್ತದೆ. ದಸರೆಯ ಕೊನೆ ದಿನದ ಈ ಆಕರ್ಷಣೆ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆಗಸದಲ್ಲಿ ಆಕರ್ಷಕ ಬಾಣ-ಬಿರುಸುಗಳ ಚಿತ್ತಾರ, ಭಾರತೀಯ ಸೇನಾ ಜವಾನರಿಂದ ಮೈ ನವಿರೇಳಿಸುವ ದ್ವಿ ಚಕ್ರ ವಾಹನದ ಸಾಹಸ ದ್ರಶ್ಯಗಳು ನೋಡುಗನ ಮನ ಸೂರೆ ಮಾಡುತ್ತವೆ.
ಅನುವಾದ - ಕಿಶೊರ್ ವೈ ಸಿ